Saturday, January 5, 2008

ಮೌನ

ಈ ಬೆಳಕು
ಎದೆಯ ಚುಚ್ಚುತ್ತವೆ.
ಗಾಯಗಳು
ಹೊಸ ಹೂವ
ಅರಳಿಸುತ್ತವೆ .
ಹೀಗೆ,
ಒಂದೆರಡು ದಿನ
ಮೌನ
ಉಪಚರಿಸುತ್ತದೆ
ಗಾಯ
ಮಾಸಿ ಹೋಗುವಂತೆ.
ಈಗೀಗ
ಗಾಯಗಳು ಮಾಮೂಲು
ಹಾಗೇ,
ಮೌನವೂ
ಬಲು ಹತ್ತಿರ.

2 comments:

Unknown said...

ಮೌನದ ಮಾತು...
ಇಷ್ಟವಾಯಿತು...

ತೇಜಸ್ವಿನಿ ಹೆಗಡೆ said...

ಎದೆಯ ಗಾಯಗಳನ್ನುಪಚರಿಸುವ ಮೌನ.. ಇಷ್ಟವಾಯಿತು.