Tuesday, February 26, 2008

ಮೌನದಲ್ಲಿ





ಮೌನದಲ್ಲೂ
ನೀನೇಕೆ ಕಾಡುವೆ
ಹೀಗೆ.

ಎದೆಯ ಬಡಿತವೆ
ಮರೆತು
ಹೋಗುವ ಹಾಗೆ.



ಪ್ರತಿ ಉಸಿರಿನಲೂ

ನಿನ್ನದೇ
ನೆನಪು.


ಲೋಕದಲ್ಲಿ

ಬೇರೆ ಏನೂ

ತಿಳಿಯದ ಹಾಗೆ.

ನೀನು ತೊರೆದು

ಹೋದ ಮೇಲೆ

ನೆನಪುಗಳದೇ ಸಂಸಾರ.

ಎಲ್ಲೂ ಹೇಳಲಾರದ

ಮಾತುಗಳು

ಮೌನ ಸಾಮ್ರಾಜ್ಯದಲಿ

ನಿನ್ನನೇ ಹುಡುಕಾಡಿವೆ.
'ಮೌನ' ರಾಗವಾಗಿ
ಎದೆ ತುಂಬಿ ಹರಿದಿದೆ .
ಎಂದೂ ಮಾಸಲಾರದ
ಆ ನೆನಪುಗಳು
ಚಿತ್ರಶಾಲೆಯನೇ
ತೆರೆದಿದೆ.
ಚಿತ್ರಗಳೆಲ್ಲ
ದುಂಬಿಗಳಾಗಿ
ಹೊರಟಿವೆ ...
ಒಡಲೊಳಗೆ ಮೂಡಿದ
ಹೊಂಗನಸುಗಳು
ಬಾನಂಗಳದಲಿ ಹಾರಾಡಿವೆ
ತಾರೆಗಳಾಗಿ.
ನೀನೊಮ್ಮೆ
ನೋಡು
ಈ ಬೆಳದಿಂಗಳಿರುಳಿನ
ಹಾಗೇ
ಮೌನವಾಗಿ .