Tuesday, January 1, 2008

ಹುಡುಕಾಟದಲ್ಲಿ

ಹುಡುಕುತ್ತವೆ
ನನ್ನ ಕಣ್ಣುಗಳು
ನೀ
ಎಲ್ಲಿರುವೆಯೆಂದು
ನೀ
ಬರುವ ದಾರಿಯಲಿ
ಎಲ್ಲಾದರು ಇರುವೆಯಾ
ಎಂದು


ಕೆಂಪು ಹಳದಿ ನೀಲಿ
ಕಪ್ಪು ಬಿಳಿ
ನೇರಳೆ
ಹೀಗೆ
ಬಣ್ಣಗಳ ಮೆರವಣಿಗೆ
ನಿನ್ನ
ಅಪ್ಪಿರುವ ಬಣ್ಣ
ಯಾವುದೆಂದು ಹುಡುಕಲು
ಹೆಜ್ಜೆ ತಪ್ಪಿ ಬೀಳುತ್ತೇನೆ

ನೀ
ಕೈಹಿಡಿದು
ಮೇಲೆತ್ತಿ ಮುದ್ದಿಸುವೆ
ಎಂಬ ಕಲ್ಪನೆ ನೋವ
ಮರೆಸುತ್ತದೆ


ಮತ್ತೆ ಹುಡುಕುತ್ತ
ಮುಂದಡಿಯಿಟ್ಟರೆ
ಯಾರುಯಾರಿಗೋ ಡಿಕ್ಕಿ
ಹೊಡೆದು
ಬೈಸಿಕೊಳ್ಳುತ್ತೇನೆ
ನಿನ್ನ
ಉದ್ದ ಜಡೆ ಕಂಡಂತಾಗಿ
ಮುಂದಕ್ಕೋಡುತ್ತೇನೆ

4 comments:

ಗಿರೀಶ್ ರಾವ್, ಎಚ್ (ಜೋಗಿ) said...

ಅಭಿನಂದನೆ ಶ್ರೀನಿಧಿ,
ಬ್ಲಾಗುಲೋಕಕ್ಕೆ ಸ್ವಾಗತ.
ನಿನ್ನ ಹುಡುಕಾಟ ನಿರಂತರವಾಗಿರಲಿ
ಮತ್ತು
ಮಿತಿ
ಮೀರು
-ಜೋಗಿ

PRANJALE said...

ಧನ್ಯವಾದಗಳು.

veena said...

ಎಲ್ಲಾ ಕವನಗಳು ಚೆನ್ನಾಗಿವೆ.

ಸುಧೇಶ್ ಶೆಟ್ಟಿ said...

ನಿಮ್ಮ ಕವನ ಚೆನ್ನಾಗಿದೆ.