Saturday, January 26, 2008

ಆಕಾಶ ಮತ್ತು ಕನಸು







..........................ಚಂದಿರೆ ನಗ್ತಾ ಇತ್ತು


ಆದ್ರೂ, ಆ ನಕ್ಷತ್ರ ಮುಗಿಲು ಬಿಟ್ಟು ಹೋದ ಸುಂದರ ನೆನಪುಗಳಲ್ಲಿ ಮುಳುಗೇಳುತ್ತಾ ಚಂದಿರೆಯ ನೋಡ್ತಾ ಹಾಗೇ ಇದೆ. ಹೋದ ಹುದು ಎಂಬ ನೀರೀಕ್ಷೆಯಲ್ಲಿ......



Sunday, January 20, 2008

ಬೆಳ್ಳಿಯ ಹಣ್ಣು


ಸೂರ್ಯ
ಜಾರಿ ಎಷ್ಟೋ
ಹೊತ್ತಾಯಿತು.
ಬಾನಲ್ಲೆಲ್ಲ
ಹತ್ತಿ ಹಾರಾಡುತ್ತಿದೆ
ಕನಸುಗಳು.

ನಾಯಿಗಳ
ಸಂಗೀತ ಸುಧೆಗೆ
ಗೊರಕೆಗಳು
ಸಾತ್ ನೀಡುತ್ತಿವೆ.
ಚುಕ್ಕಿಗಳು
ಬಯಲಲ್ಲಿ ನಿಂತು
ಪಿಳ ಪಿಳ
ನೋಡುತ್ತಿವೆ.

ದೂರದ
ಮರದ ರೆಂಬೆಯೊಂದರಲ್ಲಿ
ಬೆಳ್ಳಿಯ ಹಣ್ಣೊಂದು
ನೇತಾಡುತ್ತಿದೆ.
ನಾಳೆ
ಕರಗುವೆನೆಂಬ
ಆತಂಕ ಅದಕಿದ್ದಂತಿಲ್ಲ.

ನನ್ನ ಹಾಗೆ?!! ....
ನಿನ್ನ ಹಾಗೆ?!!!.........

Saturday, January 5, 2008

ಮೌನ

ಈ ಬೆಳಕು
ಎದೆಯ ಚುಚ್ಚುತ್ತವೆ.
ಗಾಯಗಳು
ಹೊಸ ಹೂವ
ಅರಳಿಸುತ್ತವೆ .
ಹೀಗೆ,
ಒಂದೆರಡು ದಿನ
ಮೌನ
ಉಪಚರಿಸುತ್ತದೆ
ಗಾಯ
ಮಾಸಿ ಹೋಗುವಂತೆ.
ಈಗೀಗ
ಗಾಯಗಳು ಮಾಮೂಲು
ಹಾಗೇ,
ಮೌನವೂ
ಬಲು ಹತ್ತಿರ.

Tuesday, January 1, 2008

ಹುಡುಕಾಟದಲ್ಲಿ

ಹುಡುಕುತ್ತವೆ
ನನ್ನ ಕಣ್ಣುಗಳು
ನೀ
ಎಲ್ಲಿರುವೆಯೆಂದು
ನೀ
ಬರುವ ದಾರಿಯಲಿ
ಎಲ್ಲಾದರು ಇರುವೆಯಾ
ಎಂದು


ಕೆಂಪು ಹಳದಿ ನೀಲಿ
ಕಪ್ಪು ಬಿಳಿ
ನೇರಳೆ
ಹೀಗೆ
ಬಣ್ಣಗಳ ಮೆರವಣಿಗೆ
ನಿನ್ನ
ಅಪ್ಪಿರುವ ಬಣ್ಣ
ಯಾವುದೆಂದು ಹುಡುಕಲು
ಹೆಜ್ಜೆ ತಪ್ಪಿ ಬೀಳುತ್ತೇನೆ

ನೀ
ಕೈಹಿಡಿದು
ಮೇಲೆತ್ತಿ ಮುದ್ದಿಸುವೆ
ಎಂಬ ಕಲ್ಪನೆ ನೋವ
ಮರೆಸುತ್ತದೆ


ಮತ್ತೆ ಹುಡುಕುತ್ತ
ಮುಂದಡಿಯಿಟ್ಟರೆ
ಯಾರುಯಾರಿಗೋ ಡಿಕ್ಕಿ
ಹೊಡೆದು
ಬೈಸಿಕೊಳ್ಳುತ್ತೇನೆ
ನಿನ್ನ
ಉದ್ದ ಜಡೆ ಕಂಡಂತಾಗಿ
ಮುಂದಕ್ಕೋಡುತ್ತೇನೆ