Sunday, January 20, 2008

ಬೆಳ್ಳಿಯ ಹಣ್ಣು


ಸೂರ್ಯ
ಜಾರಿ ಎಷ್ಟೋ
ಹೊತ್ತಾಯಿತು.
ಬಾನಲ್ಲೆಲ್ಲ
ಹತ್ತಿ ಹಾರಾಡುತ್ತಿದೆ
ಕನಸುಗಳು.

ನಾಯಿಗಳ
ಸಂಗೀತ ಸುಧೆಗೆ
ಗೊರಕೆಗಳು
ಸಾತ್ ನೀಡುತ್ತಿವೆ.
ಚುಕ್ಕಿಗಳು
ಬಯಲಲ್ಲಿ ನಿಂತು
ಪಿಳ ಪಿಳ
ನೋಡುತ್ತಿವೆ.

ದೂರದ
ಮರದ ರೆಂಬೆಯೊಂದರಲ್ಲಿ
ಬೆಳ್ಳಿಯ ಹಣ್ಣೊಂದು
ನೇತಾಡುತ್ತಿದೆ.
ನಾಳೆ
ಕರಗುವೆನೆಂಬ
ಆತಂಕ ಅದಕಿದ್ದಂತಿಲ್ಲ.

ನನ್ನ ಹಾಗೆ?!! ....
ನಿನ್ನ ಹಾಗೆ?!!!.........

3 comments:

Anonymous said...

ಬಾನಲ್ಲೆಲ್ಲ
ಹತ್ತಿ ಹಾರಾಡುತ್ತಿದೆ
ಕನಸುಗಳು

ನಾಳೆಯ ಆತಂಕವಿಲ್ಲ..

ಚೆನ್ನಾಗಿದೆ..

Anonymous said...
This comment has been removed by the author.
Unknown said...

All poems are nice.