skip to main
|
skip to sidebar
ಪ್ರಾಂಜಲೆ
ನಾನು ಮತ್ತು ನೀನು....
Sunday, December 20, 2009
ಒಲವೇ ..
ಎಲ್ಲಿರುವೆ ಒಲವೇ
ಸವಿ ಕ್ಷಣದ ಒಸರೇ..
ಯಾವ ಹಾಡಿನ ಸಾಲಲಿ
ಯಾವ ಸಂಭ್ರಮದ ಕಡಲಲಿ.
ಎಲ್ಲಿರುವೆ ..ಎನ್ನ ಪದಗಳ ಜೀವವೇ..
ನಿನ್ನ ಮೃದುಲ ಸ್ಪರ್ಷಕೆ
ಈ ಒಡಲ ಕಾತರಿಸಿಹುದು
ಪ್ರತಿಕ್ಷಣಕು ನಿನ್ನದೇ ಹಂಬಲ.
ಎಲ್ಲಿರುವೆ... ನನ್ನ ಮಂದಹಾಸವೇ..
ಹೇಗಿರುವೆ ಒಲವ ಸಾಕ್ಷಾತ್ಕಾರವೇ
Monday, May 25, 2009
ಪ್ರೇಮ ಭಿ ಕ್ಷೆ
ಪ್ರೀತಿಸ ಬೇಡ
ಎನ್ನ ತೋಳ ತೆಕ್ಕೆಯಲಿ
ನಿನ್ನ ಮೌನದಲ್ಲಡಗಿಹ
ಕಂಬನಿಗಳ ಸಾಲು ಜಾರಿದರೆ ಸಾಕು.
ನಿನ್ನ ಮೌನದಲ್ಲಡಗಿಹ
ಆ ಅದೃಶ್ಯ ಬಣ್ಣಗಳ
ಚಿತ್ತಾರವ ನೆನಪಿಸಿಕೊಂಡರೆ ಸಾಕು.
ನಿನ್ನ ಮೌನದಲ್ಲಡಗಿಹ
ಬರಿಯೆ ನೀನು ಸಾಕು.
ರೆಕ್ಕೆ ಕಳಚಿ ಒಮ್ಮೆ ಬಾ..
Tuesday, January 20, 2009
ಜೋಗುಳದಿಂದ- 4
ಕಣ್ಣ ನೋಟದಲ್ಲೇ
ನೂರು ಪದವ ಚೆಲ್ಲಿ
ಎನ್ನ ಮನವ ಕದ್ದ
ಚೋರಿ ನೀನು.
ದುಂಡು ಮೊಗದ
ಮಲ್ಲಿಗೆ ಮೊಗ್ಗು
ನೀ
ಮುನಿದರೂ ಬರೀ
ಕೆಂಡ ಸಂಪಿಗೆ.
ಹೂವ ಕಂಡು
ಮರುಳುಗೊಂಡೆ
ಮನದ ತುಂಬ
ನಿನ್ನ ಪರಿಮಳ
ತುಂಬಿಕೊಂಡೆ
Thursday, January 15, 2009
ಜೋಗುಳದಿಂದ- 3
ಮನದ ಬನದ
ತುಂಬೆಲ್ಲ ನಿನ್ನದೇ
ಕನಸುಗಳು.
ಕಣ್ಣ ಕೊಳದೊಳಗೆ
ಬರಿ ನಿನ್ನದೇ
ಚಿತ್ರಗಳು.
ಮಾತ ಮರೆತು
ಮೌನ ಉಲಿಯುತಿಹುದು
ಉಸಿರ ಮರೆತು
ಮನವು ಮಿಡಿಯುತಿಹುದು ನಿನಗಾಗಿ.
ಕಣ್ಣಲಿ ಕಣ್ಣಿಟ್ಟು
ಒಮ್ಮೆ ನೋಡಿದರೆ
ಅಷ್ಟು ಸಾಕು
ನಮ್ಮ ಪ್ರೆಮ ಪರ್ವದ
ನಾಂದಿಗೆ.
Monday, January 12, 2009
ಜೋಗುಳದಿಂದ- 2
ಸ್ನೇಹ ಚಿಗುರಿ
ಪ್ರೀತಿ ಬಲಿಯುವ ಮುನ್ನ
ಹಾಗೆ ಮಾಯವಾದೆ
ಏಕೆ ನನ್ನ ನಲ್ಲೆ.
ನನ್ನ ಕನಸ ಮಹಲಿನಲ್ಲಿ
ರಾಣಿಯಿಲ್ಲದ ರಾಜ ನಾನು
ಉರುಳುತಿರುವುದು
ದಿನವೂ, ಮಹಲೂ
ಬರೀ ನಿನ್ನ ನೆನಪಿನಲ್ಲೇ.
Tuesday, January 6, 2009
ಜೋಗುಳದಿಂದ- 1
ಏಕೋ ಕಾಣೆ
ಮನವು ಗುನುಗುತಿರುವುದು
ಸದಾ ನಿನ್ನ ಹೆಸರ
ಎದುರಿಗಿರಲು ನೀನು
ಹೇಳಲಾರದೆ ಕಾಡುತಿರುವುದು
ಮನವ.
ಕಾಯುತಿರುವೆ ನಾನು
ಮೌನ ಮಾತಾಗುವ
ದಿನವನು
ನಿನ್ನ ಎದೆಯೊಳಗೆ
ನಾ ಸೇರುವ
ಕ್ಷಣವನು
Saturday, August 30, 2008
ಓ ಪ್ರಾಣ ಸಖಿ..
ದೂರದೂರಿನಲಿ
ಹಸಿರ ಮೌನದಲಿ
ಬಾಳ ಹಾದಿ ಕಂಡೆ
ಸುಂದರ ಸುಮಧುರ
ಜೀವನಯಾನಕೆ
ನೀನೇ ಜೊತೆ ನನಗೆಂದೆ.
ಪ್ರೇಮ ಕಾವ್ಯ ಬರೆಯಲು
ನಿನ್ನ ನೋಟ ರಾಗವಾಗಿ
ಎದೆಯ ಮಿಡಿತ ತಾಳವಾಗಿ
ಅಲೆ ಅಲೆಯಾಗಿ ತೇಲಿ ಬಂದು
ಮೌನ ಗೀತೆ ಮಿಡಿಸಿ
ನಡೆವ ಹಾದಿಗೆ ಒಲವ ಮತ್ತೇರಿತು.
ಮನದ ಮಂದಿರದ
ಮಂದಾರ ನೀನು
ಕಂಪ ಮರೆತು ಉಳಿದೆ
ಎದೆಯ ಗುಡಿಯಲ್ಲಿ
ಪ್ರೇಮ ದೀಪವನು ಬೆಳಗಿ
ನೀನೆತ್ತ ನಡೆದೆ.
ಪ್ರೀತಿ ಹಸಿವು
ಹಂಬಲಿಸಿ ಒಡಲಿನಲಿ
ಬಳಲಿ ಬೆಂಡಾಗಿ ಕಾಡಿದೆ
ತುಂಬಿ ನನ್ನೊಳಗೆ
ನಿನ್ನ ತಿಳಿಬಿಂಬ
ಕ್ಷಣವು ಯುಗವಾಗಿ ಕಾಡಿದೆ.
ಮನದ ಮಹಲು
ನನಸಾಗಿ ತಳೆದಿರಲು
ನೀ ಇರದೆ ಈ ಬಾಳ್ವೆಯು
ಮಡಿಲ ತೊಟ್ಟಿಲಲಿ
ಮಗುವು ಉಲಿಯದೆ
ಇದು ಬರಿಯೆ ಚಿತ್ರಪಟವು.
ಉಸಿರ ಮರೆತು ನೀನಿರುವುದೆಂತು
ಕನಸ ಕಳೆದು ನಾನಿರುವುದೆಂತು
ಜೀವ ಸಖಿ ಓ ಪ್ರಾಣ ಸಖಿ
ಕಸುವು ತಂಬಿ
ತುಂ ತುಂಬಿ ತುಂಬಿ ಬಾ
ಎದೆಯ ತಣಿಸೆ
ತುಂ ತುಂಬಿ ತುಂಬಿ ಬಾ
ಜೀವ ಸಖಿ ಓ ಪ್ರಾಣ ಸಖಿ.
Newer Posts
Older Posts
Home
Subscribe to:
Posts (Atom)
ಯಾರು...........?
PRANJALE
India
DONT SEARCH ME I M IN FRONT OF U
View my complete profile
ಈ ಮೊದಲು.......
November
(1)
December
(1)
May
(1)
January
(4)
August
(2)
July
(2)
March
(1)
February
(1)
January
(4)