Saturday, August 30, 2008

ಓ ಪ್ರಾಣ ಸಖಿ..



ದೂರದೂರಿನಲಿ
ಹಸಿರ ಮೌನದಲಿ
ಬಾಳ ಹಾದಿ ಕಂಡೆ
ಸುಂದರ ಸುಮಧುರ
ಜೀವನಯಾನಕೆ
ನೀನೇ ಜೊತೆ ನನಗೆಂದೆ.

ಪ್ರೇಮ ಕಾವ್ಯ ಬರೆಯಲು
ನಿನ್ನ ನೋಟ ರಾಗವಾಗಿ
ಎದೆಯ ಮಿಡಿತ ತಾಳವಾಗಿ
ಅಲೆ ಅಲೆಯಾಗಿ ತೇಲಿ ಬಂದು
ಮೌನ ಗೀತೆ ಮಿಡಿಸಿ
ನಡೆವ ಹಾದಿಗೆ ಒಲವ ಮತ್ತೇರಿತು.

ಮನದ ಮಂದಿರದ
ಮಂದಾರ ನೀನು
ಕಂಪ ಮರೆತು ಉಳಿದೆ
ಎದೆಯ ಗುಡಿಯಲ್ಲಿ
ಪ್ರೇಮ ದೀಪವನು ಬೆಳಗಿ
ನೀನೆತ್ತ ನಡೆದೆ.

ಪ್ರೀತಿ ಹಸಿವು
ಹಂಬಲಿಸಿ ಒಡಲಿನಲಿ
ಬಳಲಿ ಬೆಂಡಾಗಿ ಕಾಡಿದೆ
ತುಂಬಿ ನನ್ನೊಳಗೆ
ನಿನ್ನ ತಿಳಿಬಿಂಬ
ಕ್ಷಣವು ಯುಗವಾಗಿ ಕಾಡಿದೆ.

ಮನದ ಮಹಲು
ನನಸಾಗಿ ತಳೆದಿರಲು
ನೀ ಇರದೆ ಈ ಬಾಳ್ವೆಯು
ಮಡಿಲ ತೊಟ್ಟಿಲಲಿ
ಮಗುವು ಉಲಿಯದೆ
ಇದು ಬರಿಯೆ ಚಿತ್ರಪಟವು.

ಉಸಿರ ಮರೆತು ನೀನಿರುವುದೆಂತು
ಕನಸ ಕಳೆದು ನಾನಿರುವುದೆಂತು
ಜೀವ ಸಖಿ ಓ ಪ್ರಾಣ ಸಖಿ
ಕಸುವು ತಂಬಿ
ತುಂ ತುಂಬಿ ತುಂಬಿ ಬಾ
ಎದೆಯ ತಣಿಸೆ
ತುಂ ತುಂಬಿ ತುಂಬಿ ಬಾ
ಜೀವ ಸಖಿ ಓ ಪ್ರಾಣ ಸಖಿ.

7 comments:

ತೇಜಸ್ವಿನಿ ಹೆಗಡೆ said...

ಮನತುಂಬಿದ ಕವನ

PRANJALE said...

thank you

ಆಲಾಪಿನಿ said...

ಏನಿಲ್ಲ ಮೇಡಮ್ ಹೀಗೆ ಸುಮ್ನೆ ಅಂತ ಹೇಳ್ತಾ ತಾವು ಯವಾಗ್ ಕವನ ಬರೆಯೋದಕ್ಕೆ ಶುರು ಮಾಡಿದ್ದು? ಜೋರಾಗಿದ್ದೀರಾ ನೀವು...

Unknown said...

ಪ್ರತಿಯೊ೦ದು ಕವನವೂ ಅರ್ಥಗರ್ಭಿತವಾಗಿವೆ.It's difficult to put which one is THE BEST.

ಬರೀತಿರಿ
~ ಹರ್ಷ

ದಿವಂಗತ said...

ಮನದ ಮಂದಿರದ
ಮಂದಾರ ನೀನು
ಕಂಪ ಮರೆತು ಉಳಿದೆ
ಎದೆಯ ಗುಡಿಯಲ್ಲಿ
ಪ್ರೇಮ ದೀಪವನು ಬೆಳಗಿ
ನೀನೆತ್ತ ನಡೆದೆ.

ಮತ್ತೊಮ್ಮೆ ಮಡುವಿನಲ್ಲಿ ಕೆಡುವವಂತಹ ಸಾಲು, ನಿಲ್ಲದಿರಲಿ ಬರವಣಿಗೆ

ಹರೀಶ್ ಕೇರ said...

nice poem.
-harish kera

jomon varghese said...

ಚೆಂದದ ಕವಿತೆ